ನಮ್ಮ ಬಗ್ಗೆ

ನವರಸ ನಟನ ಅಕಾಡೆಮಿ ಸುಸ್ವಾಗತ

ನವರಸನಟನ ಅಕಾಡೆಮಿಯಲ್ಲಿ ಚಲನಚಿತ್ರ ನಟನೆ ಮತ್ತು ನಿರ್ದೇಶನದ ತರಬೇತಿಗೆ ಪೂರ್ಣಾವಧಿ ಮತ್ತು ವಾರಾಂತ್ಯದ ತರಗತಿಗಳು ಲಭ್ಯ.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಉತ್ತಮ ನಟ ಹಾಗೂ ನಿರ್ದೇಶಕರಾಗಲು ಉತ್ತಮ ಅವಕಾಶ ಹಾಗೂ ಅಗತ್ಯ ತರಬೇತಿ ನೀಡಲಾಗುತ್ತೆ.

ನಿಮಗೆ ನಟನೆ ಮತ್ತು ನಿರ್ದೇಶನದಲ್ಲಿ ಆಸಕ್ತಿ ಮತ್ತು ಕೌಶಲ್ಯವಿದ್ದರೆ ಸಾಕು. ನಿಮಗೆ ಉತ್ತಮ ತರಬೇತಿ ನೀಡಿ ಕಿರುಚಿತ್ರದಲ್ಲಿ ನಟಿಸಲು ಮತ್ತು ನಿರ್ದೇಶಿಸಲು ಅವಕಾಶ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮದು.

ನಮ್ಮ ಸಂಸ್ಥೆಯಲ್ಲಿ ನಟನೆ ಮತ್ತು ನಿರ್ದೇಶನದ ತರಬೇತಿ ಪಡೆಯೋಕೆ ಸೇರಿದ ಎಲ್ಲರಿಗೂ ತರಬೇತಿ ನೀಡುವವರು ಸಹ ಚಿತ್ರರಂಗದಲ್ಲಿ ಪ್ರಸಿದ್ದರಾದ ವಿಶೇಷ ವ್ಯಕ್ತಿಗಳು. ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾದ ಕಲಾ ಸಾಮ್ರಾಟ್ ಎಸ್. ನಾರಾಯಣ್, ಖ್ಯಾತ ನಿರ್ದೇಶಕರಾದ ಎಸ್, ಮಹೇಂದರ್, ವಿಶಾಲ್‍ರಾಜ್, ಅನಂತರಾಜು, ಲಕ್ಕಿ ಶಂಕರ್ ನಟನೆ ಹಾಗೂ ನಿರ್ದೇಶನದ ಬಗ್ಗೆ ತರಬೇತಿ ನೀಡಿದ್ರೆ ಅನಿಲ್ ಅಂಬಾರಿ ಹಿನ್ನಲೆ ಸಂಗೀತ, ಕುಂಗ್ ಫೂ ಚಂದ್ರು ಸಾಹಸ, ಮಾಲೂರ್ ಶ್ರೀನಿವಾಸ್ ನೃತ್ಯ ಹೇಳಿಕೊಡುತ್ತಾರೆ. ಜೊತೆಗೆ ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ಪ್ರಸಿದ್ಧರಾದ ನಟ ನಟಿಯರು ಹಾಗೂ ನಿರ್ದೇಶಕರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ.

ಇಂತಹ ಒಂದು ತಜ್ಞರ ತಂಡವೇ ನಿಮ್ಮನ್ನು ನಟರಾಗಿ, ನಿರ್ದೇಶಕರಾಗಿ ರೂಪಿಸಲು ಸಜ್ಜುಗೊಂಡಿದೆ. ಇದರೊಂದಿಗೆ ನಿಮ್ಮ ನಟನೆ ಮತ್ತು ನಿರ್ದೇಶನದ ಕೌಶಲ್ಯವನ್ನು ಹೆಚ್ಚಿಸಲು ತಂತ್ರಜ್ಞರಿಂದ ವಿಶೇಷ ತರಗತಿಗಳು ಮತ್ತು ವಿಭಿನ್ನ ಸಲಹೆಗಳು ಕೂಡ ಸಿಗುತ್ತೆ.

ನಿಮ್ಮನ್ನು ನಟರನ್ನಾಗಿ ಮಾಡಲು ಕೇವಲ ಅಭಿನಯ ಹೇಳಿಕೊಟ್ಟರೆ ಸಾಕಾಗೋದಿಲ್ಲ ಅಲ್ವಾ? ಆದ್ದರಿಂದ ನಮ್ಮ ನವರಸ ನಟನ ಅಕಾಡೆಮಿಯಲ್ಲಿ ನವರಸಗಳ ಕಲಿಕೆಯ ಜೊತೆಗೆ ಇತರೆ ವಿಶೇಷ ಕಲೆಗಳನ್ನು ಕಲಿಯುವ ಅವಕಾಶವಿದೆ. ನಟನೆ ಜೊತೆಗೆ ನೃತ್ಯ, ನೃತ್ಯದ ಜೊತೆ ಚಲನಚಿತ್ರ ಸಾಹಸ, ಬಾಡಿ ಫಿಟ್ ಆಗಿರೋಕೆ ಏರೋಬಿಕ್ಸ್, ಮನಸ್ಸು ರಿಲಾಕ್ಸ್ ಆಗೋಕೆ ಯೋಗ, ವ್ಯಕ್ತಿತ್ವ ವಿಕಸನದ ಜೊತೆಗೆ ಧ್ವನಿ ಮತ್ತು ವಾಕ್ಶೈಲಿ ಕಲಿಕೆ, ಇದರ ಜೊತೆಗೆ ಸ್ವಿಮ್ಮಿಂಗ್, ಕಾರ್ ಡ್ರೈವಿಂಗ್ ಮತ್ತು ಹಾರ್ಸ್ ರೈಡಿಂಗ್.

ನಾಲ್ಕು ಗೋಡೆಗಳ ಮಧ್ಯ ಕಲಿಯುವ ಸಾಂಪ್ರದಾಯಿಕ ಕಲಿಕೆಗೆಗಿಂತ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ. ತರಬೇತಿ ಆದ ನಂತರ ಫೋಟೋ ಶೂಟ್ ಜೊತೆಗೆ ನಿಮ್ಮ ಅಭಿನಯದ ಕಿರುಚಿತ್ರ ತೆರೆಗೆ.

ಇನ್ನು ನಿರ್ದೇಶನ ಕಲಿಯಬೇಕು ಅಂತ ಬಯಸೋರಿಗೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ಸಾಹಿತ್ಯ ರಚನೆ, ಚಿತ್ರ ವಿಮರ್ಶೆ, ಬೆಳಕು, ಧ್ವನಿ, ಸಂಕಲನ, ಸಂಯೋಜನೆಗಳ ಬಗ್ಗೆಯೂ ವಿಶೇಷ ಜ್ಞಾನ ಸಂಪಾದನೆ. ನಿಮ್ಮದೇ ನಿರ್ದೇಶನದಲ್ಲಿ ನಿಮ್ಮ ಚೊಚ್ಚಲ ಕಿರುಚಿತ್ರವನ್ನು ತೆರೆಯ ಮೇಲೆ ಮೂಡಿಸೋ ಅವಕಾಶವೂ ಇದೆ.